February 3, 2026

ಯುವತಿಗೆ ಬಣ್ಣ ಹಚ್ಚಿದ ವಿದ್ಯಾರ್ಥಿಯನ್ನು ಅಪಹರಿಸಿ ಹಲ್ಲೆ: ಆರೋಪಿಗಳ ಬಂಧನ

0
image_editor_output_image339779450-1679558967741.jpg

ಕೋಲಾರ: ಯುವತಿಗೆ ಬಣ್ಣ ಹಚ್ಚಿದ ಹಿನ್ನೆಲೆ, ಕಾನೂನು ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿರುವ ಘಟನೆ ಕೋಲಾರದ ಬೆಳಮಾರನಹಳ್ಳಿಯಲ್ಲಿ ನಡೆದಿದೆ.

ಅಂತಿಮ ಕಾನೂನು ವಿದ್ಯಾರ್ಥಿ ಬಿ.ಸಿ.ಮಧು ಹಲ್ಲೆಗೊಳಗಾದ ಯುವಕ. ಹೋಳಿ ಹಬ್ಬದ ದಿನದಂದು ತನ್ನದೇ ಗ್ರಾಮದ ಎಂಜಿನಿಯರ್ ವಿದ್ಯಾರ್ಥಿನಿ ಅನುಪ್ರಿಯಾಗೆ ಮಧು ಬಣ್ಣ ಹಚ್ಚಿದ್ದ. ಇದರಿಂದ ಕೋಪಗೊಂಡ ಅನುಪ್ರಿಯಾ ಆತನ ಮೇಲೆ ಹಲ್ಲೆ ನಡೆಸಲು ಸುಪಾರಿ ನೀಡಿದ್ದಾಳೆ.

ಅನುಪ್ರಿಯಾ ಅದೇ ಗ್ರಾಮದವಳಾಗಿದ್ದು ಮಧುವಿನ ಪಕ್ಕದ ಮನೆಯಲ್ಲಿ ವಾಸವಿದ್ದಳು. ಈ ಸಲುಗೆಯಿಂದ ಮಧು ಹೋಳಿ ಹಬ್ಬದ ದಿನದಂದು ಕಾಲೇಜಿಗೆ ಬಸ್‌ನಲ್ಲಿ ಹೋಗುವ ಸಂದರ್ಭ ಆಕೆಗೆ ಬಣ್ಣ ಹಾಕಿದ್ದಾನೆ.

ಇದರಿಂದ ಕೋಪಗೊಂಡ ಅನುಪ್ರಿಯಾ ಪಕ್ಕದ ದಾನಹಳ್ಳಿ ಗ್ರಾಮದ ಡಿಎನ್‌ಡಿ ಮಧು ಮತ್ತು ಆತನ ಸಹಚರರಿಗೆ ಸುಪಾರಿ ಕೊಟ್ಟು ಮಧುವಿಗೆ ಹೊಡೆಯುವಂತೆ ತಿಳಿಸಿದ್ದಾಳೆ.

ಸುಪಾರಿ ಪಡೆದ ಡಿಎನ್‌ಡಿ ಮಧು ಅದೇ ಗ್ರಾಮದ ಪ್ರಮೋದ್, ಶಿವರಾಜ್, ಸುದರ್ಶನ್ ಅವರ ಸಹಾಯದಿಂದ ಮಧುಗೆ ದೂರವಾಣಿ ಮುಖಾಂತರ ಕರೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!