February 4, 2026

ಸಿಗರೇಟ್‌ ಸೇದಲು ಬೆಂಕಿ ಪೊಟ್ಟಣ ನೀಡದ ಆಟೋ ಚಾಲಕನಿಗೆ ಬಾಕುವಿನಿಂದ ಇರಿತ

0
image_editor_output_image-1450602870-1679477083343.jpg

ಬೆಂಗಳೂರು: ಬೆಂಕಿಪೊಟ್ಟಣ ನೀಡಲಿಲ್ಲವೆಂಬ ಕಾರಣಕ್ಕೆ ಆಟೊ ಚಾಲಕ ಸರ್ದಾರ್ ಎಂಬುವವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ಜಾನಕಿರಾಮ್ ಬಡಾವಣೆ ನಿವಾಸಿ ಸರ್ದಾರ್ ಅವರು ಘಟನೆ ಬಗ್ಗೆ ದೂರು ನೀಡಿದ್ದಾರೆ. ಕೃತ್ಯದ ನಂತರ ಆರೋಪಿ ಪರಾರಿಯಾಗಿದ್ದು, ಆತನನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಸರ್ದಾರ್ ಅವರು ಆಟೊ ಚಲಾಯಿಸಿಕೊಂಡು ಮನೆ ಸಮೀಪದಲ್ಲಿ ಸೋಮವಾರ ಸಂಜೆ ಹೊರಟಿದ್ದರು. ಯುವತಿ ಜೊತೆ ಬೈಕ್‌ನಲ್ಲಿ ಹೊರಟಿದ್ದ ಯುವಕನೊಬ್ಬ, ಆಟೊ ಅಡ್ಡಗಟ್ಟಿದ್ದ. ಸಿಗರೇಟ್‌ ಸೇದಲು ಬೆಂಕಿ ಪೊಟ್ಟಣ ನೀಡುವಂತೆ ಕೇಳಿದ್ದ. ತಮ್ಮ ಬಳಿ ಇಲ್ಲವೆಂದು ಸರ್ದಾರ್ ಹೇಳಿದ್ದರು.’

‘ಕೋಪಗೊಂಡಿದ್ದ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಬಳಿಕ, ಸರ್ದಾರ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಸರ್ದಾರ್ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!