February 3, 2026

ಶಿವಮೊಗ್ಗ: ಕ್ರೈಸ್ತರ ಪಾರ್ಥನಾ ಸಭೆಗೆ ನುಗ್ಗಿ ಗೂಂಡಾಗಿರಿ ನಡೆಸಿದ ಬಜರಂಗದಳದ ಕಾರ್ಯಕರ್ತರು

0
image_editor_output_image1143604728-1679291889855.jpg

ಶಿವಮೊಗ್ಗ: ಕ್ರೈಸ್ತರ ಪಾರ್ಥನಾ ಸಭೆಗೆ ನುಗ್ಗಿದ ಬಜರಂಗ ದಳದ ಕಾರ್ಯಕರ್ತರು ಬಲವಂತದ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ದಾಂಧಲೆವೆಬ್ಬಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಗೋಪಶೆಟ್ಟಿ ರಸ್ತೆಯ ಮನೆಯೊಂದರಲ್ಲಿ ಕಳೆದ 15 ವರ್ಷಗಳಿಂದ ಪ್ರಾರ್ಥನಾ ಸಭೆ ನಡೆಯುತ್ತಿದೆ.

ಸ್ಥಳೀಯ ಮಹಿಳೆಯರು, ಪುರುಷರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ನಿನ್ನೆ ಕೂಡ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು.

ಪ್ರಾರ್ಥನೆ ನಡೆಯುತ್ತಿದ್ದಂತೆ ಏಕಾಏಕಿ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಘೋಷಣೆ ಕೂಗಿ ಪ್ರಾರ್ಥನೆ ಅಡ್ಡಿಪಡಿಸಿದ್ದಲ್ಲದೆ ಅಲ್ಲಿದ್ದ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ.

Leave a Reply

Your email address will not be published. Required fields are marked *

error: Content is protected !!