September 26, 2026

ಮಂಗಳೂರು: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು: 250 ಲೋಡ್‌ ಮರಳು ವಶಕ್ಕೆ

0
image_editor_output_image1581127120-1679290076718.jpg

ಮಂಗಳೂರು: ಅಕ್ರಮವಾಗಿ ದಾಸ್ತಾನಿಟ್ಟಿದ್ದ ಸುಮಾರು 250 ಲೋಡ್‌ ಮರಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುರತ್ಕಲ್ ಗ್ರಾಮದ ಮುಂಚೂರು ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಸುಮಾರು 100 ಲೋಡ್ ಮರಳು ಜೊತೆಗೆ ಚೇಳ್ಯಾರು ಗ್ರಾಮದಲ್ಲಿ ಸುಮಾರು 150 ಲೋಡ್ ನಷ್ಟು ಮರಳನ್ನು ವಶಕ್ಕೆ ಪಡೆದಿದ್ದಾರೆ ಇದರೊಂದಿಗೆ ಒಟ್ಟು 35 ಲಕ್ಷ ಮೌಲ್ಯದ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಭೂ ಮಾಲೀಕರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!