ಶಿಸ್ತು ಬದ್ಧ ಧರ್ಮ ಬೋಧಕರಾಗಿ: ಉಕ್ಕುಡ ಪೂರ್ವ ವಿದ್ಯಾರ್ಥಿ ಸಂಗಮದಲ್ಲಿ ಹಾಫಿಳ್ ಮಳಲಿ ಉಸ್ತಾದ್
ಉಕ್ಕುಡ : ಉಕ್ಕುಡ ಮುಹ್ಯಿಸ್ಸುನ್ನಃ ದರ್ಸಿನ ಪೂರ್ವ ವಿದ್ಯಾರ್ಥಿಗಳ ಸಂಗಮ ಬದ್ರೀಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಹಾಫಿಳ್ ಮಳಲಿ ಉಸ್ತಾದರ ಅಧ್ಯಕ್ಷತೆಯಲ್ಲಿ , ಬದ್ರೀಯಾ ಜುಮಾ ಮಸೀದಿ ಅಧ್ಯಕ್ಷರಾಗಿರುವ ತಾಮ ಅಬ್ಬಾಸ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿ ಶರೀಫ್ ತ್ವಯ್ಯಿಬರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸಂಸ್ಥೆಯ ಗೌರಾವಾಧ್ಯಕ್ಷ ಹಾಫಿಳ್ ಮಳಲಿ ಉಸ್ತಾದರ ನೇತೃತ್ವದಲ್ಲಿ 2022-23 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ, ಇಸ್ಮಾಯಿಲ್ ಸಖಾಫಿ ಖತೀಬರು, ಗ್ರೀನ್ ಮಸೀದಿ ಕುಂದಾಪುರ ಉಸ್ತಾದರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ರಿಳ್ವಾನ್ ಸಖಾಫಿ ಬೋಂದೆಲ್ ಹಾಗೂ ಕೋಶಾಧಿಕಾರಿಯಾಗಿ ಶಾಹುಲ್ ಹಮೀದ್ ಫಾಳಿಲಿ ಬೋಂದೆಲ್. ದಅ್ ವ ಕಾರ್ಯದರ್ಶಿಯಾಗಿ ಸಫ್ವಾನ್ ಜೌಹರಿ ಅರಳ ಮದರ್ರಿಸ್ ಮಂಜ,ಇರ್ಫಾನ್ ಸಖಾಫಿ ವೇಣೂರು ಮುದರ್ರಿಸ್ ಕಾಜೂರು. ಅಕಾಡೆಮಿಕ್ ಡೈರೆಕ್ಟರ್ ಮುರ್ಷಿದ್ ಹಾಶಿಮಿ ಲಾಡಿ ಮುದರ್ರಿಸ್ ಕುಪ್ಪೆಟ್ಟಿ, ಮಿಕ್ದಾದ್ ಹಾಶಿಮಿ ಮುದರ್ರಿಸ್ ವೇಣೂರು. Financial ಕಾರ್ಯದರ್ಶಿ ಅನ್ಸಾರ್ ಸಖಾಫಿ ಕುಂದಾಪುರ, ಖತೀಬರು ಕೊಪ್ಪ ಜೊಗೀಸರ. ಕ್ಲಾಸ್ ಡೈರೆಕ್ಟರ್ ಶಫೀಕ್ ಹಾಶಿಮಿ ಕಾವಳಕಟ್ಟೆ ಮುದರ್ರಿಸ್ ಬಜಾಲ್, ಉಸ್ತಾದರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಮುದರ್ರಿಸರಾಗಿರುವ ಹಾಫಿಳ್ ಮಳಲಿ ಉಸ್ತಾದರು ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಇಸ್ಮಾಯಿಲ್ ಸಖಾಫಿ ಮಳಲಿ ಉಸ್ತಾದರು ಸ್ವಾಗತಿಸಿದರು.ಇರ್ಫಾನ್ ಸಖಾಫಿ ವೇಣೂರು ಉಸ್ತಾದರು ವಂದಿಸಿದರು. ಪೂರ್ವ ವಿದ್ಯಾರ್ಥಿಗಳೆಲ್ಲರೂ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಿದರು.




