ಕುಂದಾಪುರ: ಗಿಡಗಂಟಿಗಳ ಮಧ್ಯೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
ಕುಂದಾಪುರ: ದೃಢಕಾಯದ ಯುವಕನೊಬ್ಬನ ದೇಹವು ಕೊಳೆತು ಹುಳುಗಳಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ ಹಕ್ಲಾಡಿ ಎಂಬಲ್ಲಿ ನಡೆದಿದ್ದು, ಗಿಡಗಂಟಿಗಳ ಮಧ್ಯೆ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯರು ಓಡಾಡುತ್ತಿದ್ದ ಸಂದರ್ಭ ವಿಪರೀತ ವಾಸನೆ ಬರುತ್ತಿದ್ದು, ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಗಂಗೊಳ್ಳಿ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದು, ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.




