ಲಕ್ಷಾಂತರ ರೂಪಾಯಿ ದರೋಡೆ: ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿಯ ಬಂಧನ
ಪಣಜಿ: ಜೋಧ್‍ಪುರದಲ್ಲಿರುವ ಜೆಸರಾಂ ಅವರ ಕಚೇರಿಗೆ ನುಗ್ಗಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿಯನ್ನು ಪಣಜಿ ಪೊಲೀಸರು ಬಂಧಿಸಿದ್ದಾರೆ.
ಪಣಜಿ ಪೋಲಿಸ್ ಬಂಧಿಸಿದ ಈ ಅಪರಾಧಿಯನ್ನು ಸರ್ದಾರ್ ಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ಜೋಧಪುರಕ್ಕೆ ತೆರಳಿದ್ದಾರೆ ಎಂದು ಗೋವಾ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಾಲ್ಸನ್ ತಿಳಿಸಿದ್ದಾರೆ. ಶಂಕಿತ ಆರೋಪಿ ಪವನ್ ಸೋಲಂಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಎನ್ನಲಾಗಿದೆ.




