March 12, 2026

ಹಳಿ ದಾಟುತ್ತಿದ್ದಾಗ ರೈಲಿಗೆ ಸಿಲುಕಿ ಮೂವರು ಮೃತ್ಯು

0
image_editor_output_image745452162-1679122056413.jpg

ಧನ್ಬಾದ್: ಹಳಿ ದಾಟುತ್ತಿದ್ದಾಗ ರೈಲಿಗೆ ಸಿಲುಕಿ ಮೂವರು ಮೃತಪಟ್ಟ ಘಟನೆ ಜಾರ್ಖಂಡ್‌ನ ಧನ್ಬಾದ್ ರೈಲ್ವೆ ವಿಭಾಗದ ನೇತಾಜಿ ಸುಭಾಸ್ ಚಂದ್ರ ಬೋಸ್ ಗೊಮೊಹ್ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮನೋಜ್ ಸಾಬ್ (19), ಶಿವಚರಣ್ ಸಾಬ್ (20) ಮತ್ತು ಬಬ್ಲೂ ಕುಮಾರ್ (20) ಮೃತ ದುರ್ದೈವಿಗಳು.

ಮೂವರೂ ಧನ್ಬಾದ್ ರೈಲ್ವೆ ವಿಭಾಗದ ನೇತಾಜಿ ಸುಭಾಸ್ ಚಂದ್ರ ಬೋಸ್ ಗೊಮೊಹ್ ರೈಲು ನಿಲ್ದಾಣ ಬಳಿ ಹಳಿ ದಾಟುತ್ತಿದ್ದ ವೇಳೆ ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಆಗಮಿಸಿದ್ದು, ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ನಿಲ್ದಾಣದಲ್ಲಿ ಈ ರೈಲಿಗೆ ನಿಲುಗಡೆ ಇರಲಿಲ್ಲ. ಮೂವರ ದೇಹಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಆರ್ಪಿಎಫ್ ಇನ್ಸ್ಪೆಕ್ಟರ್ ವಿಜಯ್ ಶಂಕರ್ ತಿಳಿಸಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!