March 22, 2026

ಉಳ್ಳಾಲ: ಬಾಡಿಗೆ ಮನೆಯ ಶೌಚಾಲಯದಲ್ಲಿ ಚೂರಿಯಿಂದ ಇರಿದು ದೆಹಲಿ ಮೂಲದ ಮಹಿಳೆಯ ಹತ್ಯೆ

0
IMG-20230316-WA0020.jpg

ಉಳ್ಳಾಲ: ಕೋಟೆಪುರದ ಬಾಡಿಗೆ ಮನೆಯ ಶೌಚಾಲಯದಲ್ಲಿ ಚೂರಿಯಿಂದ ಇರಿಯಲ್ಪಟ್ಟು ಹತ್ಯೆಯಾದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ.

ದೆಹಲಿ ಮೂಲದ 40-45 ರ ಹರೆಯದ ಮಹಿಳೆಯ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.

ಇನ್ನು ಮಹಿಳೆ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದಾನೆ. ಮೂರು ದಿನಗಳ ಹಿಂದಷ್ಟೆ ಕೋಟೆಪುರಕ್ಕೆ ಬಂದಿದ್ದ ಈ ಜೋಡಿ ಸ್ಥಳೀಯ ಸೆಲೂನ್ ಮಾಲೀಕರ ಪರಿಚಯ ಬೆಳೆಸಿ ಅವರ ಮೂಲಕ ಬಾಡಿಗೆ ಮನೆಯನ್ನು ಪಡೆದಿದ್ದರು ಎಂದು ವರದಿಯಾಗಿದೆ.

ಮನೆ ಮಾಲೀಕರಲ್ಲಿ ತಾವು ಬಟ್ಟೆ ವ್ಯಾಪಾರ ನಡೆಸುವವರು, ಇನ್ನೇನು ವ್ಯಾಪಾರ ನಡೆಸಲು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿದ್ದರಂತೆ. ಇಂದು ಸಂಜೆ ವೇಳೆ ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಗಮನಿಸಿ ಸ್ಥಳೀಯ ಯುವಕನೋರ್ವ ಮನೆಯನ್ನು ಗಮನಿಸಿದಾಗ ಶೌಚಾಲಯದೊಳಗೆ ಮಹಿಳೆ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇನ್ನು ಸ್ಥಳಕ್ಕೆ ಉಳ್ಳಾಲ ಪೊಲೀಸರು, ವಿಧಿ ವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!