February 3, 2026

ಪುತ್ತೂರು: ನಗರಸಭಾ ಸದಸ್ಯ ನೇಣು ಬಿಗಿದು ಆತ್ಮಹತ್ಯೆ

0
InShot_20230316_132206047.jpg

ಪುತ್ತೂರು: ನಗರಸಭಾ ಸದಸ್ಯರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಮೃತರನ್ನು ಪುತ್ತೂರು ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ಎಂದು ಗುರುತಿಸಲಾಗಿದೆ. ಶಿವರಾಮ್ ಸಪಲ್ಯ ರವರು ಊರಮಾಲು ನಿವಾಸಿಯಾಗಿದ್ದು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದದ್ದಾರೆನ್ನಲಾಗಿದೆ.

ಪತಿಯು ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದು ಪತ್ನಿಯು ಹತ್ತಿರದ ಮನೆಯವರ ಹತ್ತಿರ ಮನೆ ಬಳಿ ತೆರಳುವಂತೆ ತಿಳಿಸಿದ್ದು, ಈ ವೇಳೆ ಅವರು ಮನೆ ಬಳಿ ತೆರಳಿ ನೋಡಿದಾಗ ಶಿವರಾಮ್ ರವರು ನೇಣು ಬಿಗಿದುಕೊಂಡಿದ್ದರು ಎಂದು ವರದಿಯಾಗಿದೆ.

ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *

error: Content is protected !!