February 3, 2026

ಆಟ ಆಡುತ್ತಿದ್ದಾಗ ಕಟ್ಟಡದ ಮೇಲಿನಿಂದ ಬಿದ್ದು ಮಗು ಸಾವು

0
image_editor_output_image707321023-1678862209866.jpg

ಬೆಂಗಳೂರು: ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದೆ.

ನಗರದ 6ನೇ ಕ್ರಾಸ್‍ನ ವಿನಯ್ ಎಂಬುವವರ ಪುತ್ರಿ ದೀಕ್ಷಾ ಮೃತಪಟ್ಟ ಮಗು. ರಾತ್ರಿ 9 ಗಂಟೆಗೆ ಮಗುವಿಗೆ ತಾಯಿ ಊಟ ಮಾಡಿಸುತ್ತಿದ್ದಾಗ ಆಟವಾಡುತ್ತ ಗ್ರಿಲ್ ಮೇಲೆ ಹತ್ತಿದೆ.

ಕ್ಷಣಾರ್ಧದಲ್ಲಿ ನೋಡು ನೋಡುತ್ತಿದ್ದಂತೆ ಮಗು ಜಾರಿ ಕೆಳಗೆ ಬಿದ್ದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.

Leave a Reply

Your email address will not be published. Required fields are marked *

error: Content is protected !!