February 3, 2026

ಬಂಟ್ವಾಳ: ಪಶು ಆಸ್ಪತ್ರೆ ಮುಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ: ಕೆಲತಾಸುಗಳ ಕಾಲ ಆತಂಕ‌

0
IMG-20230312-WA0005.jpg

ಬಂಟ್ವಾಳ: ಬೆಂಕಿ‌ ಕಾಣಿಸಿಕೊಂಡ‌ ಹಿನ್ನಲೆಯಲ್ಲಿ ಕೆಲತಾಸುಗಳ ಕಾಲ ಆತಂಕ‌ ಉಂಟಾದ ಘಟನೆ ಮಾಣಿ ಪಶು ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ‌ಯಲ್ಲಿ ಆಕಸ್ಮಿಕ ಬೆಂಕಿ‌ ಕಾಣಿಸಿಕೊಂಡಿದ್ದು, ಹೆದ್ದಾರಿ ಪಕ್ಕದ ವರೆಗೂ ಆವರಿಸಿತ್ತು, ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಮುಖಂಡ ಗಣೇಶ್ ರೈ ಮಾಣಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ತಕ್ಷಣ ಆಗಮಿಸಿದ ಅಗ್ನಿ ಶಾಮಕದಳ ದ ಸಿಬ್ಬಂದಿಗಳು ಬೆಂಕಿ‌ ನಂದಿಸಿದ್ದಾರೆ.

ವಿದ್ಯುತ್ ಕಂಬದಿಂದ‌ ಬೆಂಕಿಯ ಕಿಡಿಗಳು ತರಗೆಲೆ ಮೇಲೆ‌ ಬಿದ್ದು ಬೆಂಕಿ‌ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ಘಟನೆಯಿಂದ ಸ್ಥಳಿಯವಾಗಿ ‌ಹಾಕಲಾಗಿದ್ದ ಕೇಬಲ್‌ ವಯರ್ ಗಳು ಸುಟ್ಟು ಕರಕಲಾಗಿದೆ.

Leave a Reply

Your email address will not be published. Required fields are marked *

error: Content is protected !!