ಮಂಗಳೂರು: ನಟಿಯ ತಾಯಿ ಬಳಿ 38,000 ರೂ. ಪೀಕಿಸಿದ ನಕಲಿ ಪೊಲೀಸ್
ಮಂಗಳೂರು: ಇಲ್ಲಿನ ನಟಿಯೊಬ್ಬರ ತಾಯಿ ಬಳಿ ವ್ಯಕ್ತಿಯೊಬ್ಬ ಹಣ ಪೀಕಿದ ಘಟನೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸ್ ಯೂನಿಫಾರಂನಲ್ಲೇ ಬಂದಿದ್ದ ವ್ಯಕ್ತಿಯೊಬ್ಬ ‘ತಾನು ಪೊಲೀಸ್. ನೀವು ಹಣ ಕೊಡದೇ ಇದ್ದರೆ ನಿಮ್ಮ ಮನೆಯ ಮೇಲೆ ದಾಳಿ ಮಾಡಲಾಗುತ್ತದೆ’ ಎಂದು ನಟಿಯ ತಾಯಿಗೆ ಹೆದರಿಸಿ ಅವರಿಂದ 38 ಸಾವಿರ ರೂಪಾಯಿ ವಸೂಲಿ ಮಾಡಿಕೊಂಡಿದ್ದಾನೆ. ಈ ಕುರಿತು ನಟಿಯ ತಾಯಿ ದೂರು ಕೂಡ ನೀಡಿದ್ದಾರೆ.




