August 21, 2026

ಸುರತ್ಕಲ್ ಬೀಚ್ ನಲ್ಲಿ ಭಿನ್ನ ಕೋಮಿನ ಜೋಡಿ ಪತ್ತೆ:
ಪೊಲೀಸ್ ವಶಕ್ಕೆ

0
images-56.jpeg

ಮಂಗಳೂರು: ಕುದ್ರೋಳಿಯ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೋರ್ವಳು ಕಾರಿನಲ್ಲಿ ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬೀಚ್ ನಲ್ಲಿ ಶುಕ್ರವಾರದಂದು ಸಂಜೆ ನಡೆದಿದೆ.

ಯುವಕನನ್ನು ಮೆಹಬೂಬ್ ಎಂದು ಗುರುತಿಸಲಾಗಿದೆ. ಯುವತಿಯು ಮೂಲತಃ ಹುಬ್ಬಳ್ಳಿಯವಳಾಗಿದ್ದು, ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಈಕೆ ಕೃಷ್ಣಾಪುರದ ಪಿಜಿಯೊಂದರಲ್ಲಿ ವಾಸ್ತವ್ಯ ಇರುವುದಾಗಿ ಮೂಲಗಳು ತಿಳಿಸಿದೆ.

ಸದ್ಯ ಯುವಕನ ಜೊತೆ ಪತ್ತೆಯಾದ ಯುವತಿಯನ್ನು ಸುರತ್ಕಲ್ ಪೋಲಿಸರ ವಶಕ್ಕೆ ಪಡೆದಿದ್ದಾರೆ. ಇಂದು ಸಂಜೆ ಸುರತ್ಕಲ್ ಬೀಚ್ ಬಳಿ ಕಾರಿನಲ್ಲಿ ಜೋಡಿಯೊಂದು ಏಕಾಂತದಲ್ಲಿದ್ದು, ಪಕ್ಕದಲ್ಲೇ ಇನ್ನೋರ್ವ ಅವರಿಗೆ ಸೆಕ್ಯುರಿಟಿಯಾಗಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸುರತ್ಕಲ್ ಭಜರಂಗದಳದ ಕಾರ್ಯಕರ್ತರು ಮೊದಲು ಆತನನ್ನು ವಿಚಾರಿಸಿ, ನಂತರ ಜೋಡಿಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!