May 15, 2026

ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್‌: ಇಬ್ಬರು ಯುವತಿಯರು ಸೇರಿ 6 ಮಂದಿಯ ಬಂಧನ

0
image_editor_output_image1549959467-1678442478047.jpg

ಬೆಂಗಳೂರು: ವೆಬ್‌ಸೈಟ್‌ ಮೂಲಕ ಪರಿಚಯವಾದ ವ್ಯಕ್ತಿಗಳನ್ನು ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್‌ ಮಾಡುತ್ತಿದ್ದ ಇಬ್ಬರು ಯುವತಿಯರು ಸೇರಿ 6 ಮಂದಿಯ ತಂಡವನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಅನಿಲ್‌ ಕುಮಾರ್‌ (37), ತುಮಕೂರಿನ ಗಿರೀಶ್‌ (36), ಬ್ಯಾಟರಾಯನಪುರ ನಿವಾಸಿ ಶಿವಶಂಕರ್‌(50) ಮತ್ತು ರಾಜಾಜಿನಗರ ನಿವಾಸಿ ರಾಮಮೂರ್ತಿ(37) ಹಾಗೂ ಇಬ್ಬರು ಯುವತಿ ಯರನ್ನು ಬಂಧಿಸಲಾಗಿದೆ.

ಆರೋಪಿಗಳು 39 ವರ್ಷದ ರಾಜಶ್ರೀಲೇಔಟ್‌ ನಿವಾಸಿ ಶ್ರೀನಿವಾಸ್‌ ಎಂಬುವರಿಗೆ 10 ಲಕ್ಷ ರೂ.ಗೆ ಬೇಡಿಕೆ ಇಟ್ಟು, ಈ ಪೈಕಿ 3 ಲಕ್ಷ ರೂ. ಪಡೆದು ವಂಚಿಸಿದ್ದರು ಎಂದು ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

error: Content is protected !!