May 15, 2026

ಬಿಸಿ ಟೀ ತಂದುಕೊಡದ್ದಕ್ಕೆ ಗದರಿದ ಅತ್ತೆಯನ್ನೇ ರಾಡ್‍ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಸೊಸೆ

0
image_editor_output_image-123201374-1678428659917.jpg

ಚೆನ್ನೈ: ಬಿಸಿ ಟೀ ತಂದುಕೊಡದ್ದಕ್ಕೆ ಗದರಿದ ಅತ್ತೆಯನ್ನೇ ಸೊಸೆ ರಾಡ್‍ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಕೊಲೆಯಾದವರನ್ನು ವಿರಾಲಿಮಲೈ ಮೂಲದ ಪಳನಿಯಮ್ಮಾಳ್ ಎಂದು ಗುರುತಿಸಲಾಗಿದೆ. ಇವರು ತಮಿಳುನಾಡಿನ ಪುದುಕೋಟೆ ಜಿಲ್ಲೆಯವರು. ಇವರನ್ನು ಸೊಸೆ ಕನಕು ಕೊಲೆ ಮಾಡಿದ್ದಾಳೆ.

ಪಳನಿಯಮ್ಮಾಳ್‍ಗೆ ಟೀ ತರಲು ಸೊಸೆಯನ್ನು ಅಂಗಡಿಗೆ ಕಳುಹಿಸುತ್ತಿದ್ದಳು. ಹಿಂದಿನ ದಿನವೂ ಇದೇ ರೀತಿಯಲ್ಲಿ ಪಳನಿಯಮ್ಮಾಳ್ ತನ್ನ ಸೊಸೆಯನ್ನು ಟೀ ತರಲು ಕಳುಹಿಸಿದ್ದರು.

ಆದರೆ ಅಂದು ಅತ್ತೆ ಪಳನಿಯಮ್ಮಾಳ್ ಬಿಸಿ ಟೀ ತಂದಿಲ್ಲ ಎಂದು ಗದರಿಸಿದ್ದಾಳೆ. ಇದರಿಂದ ಕೋಪಗೊಂಡ ಸೊಸೆ ಕನಕು ಸೈಕಲ್ ರಿಪೇರಿಗೆ ಬಳಸುವ ಕಬ್ಬಿಣದ ರಾಡ್‍ನಿಂದ ಪಳನಿಯಮ್ಮಾಳ್ ತಲೆಗೆ ಜೋರಾಗಿ ಹೊಡೆದಿದ್ದಾಳೆ.

ಇದರಿಂದ ಪಳನಿಯಮ್ಮಾಳ್ ತೀವ್ರ ರಕ್ತಸ್ರಾವದಿಂದಾಗಿ ಮೂರ್ಛೆ ಹೋಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!