February 3, 2026

ಕಾಸರಗೋಡು: ಎಮ್ಮೆ ತಿವಿದು ಯುವಕ ಮೃತ್ಯು

0
image_editor_output_image1172482598-1678426065041.jpg

ಕಾಸರಗೋಡು:ಎಮ್ಮೆ ತಿವಿದು ಯುವಕನೋರ್ವ ಮೃತಪಟ್ಟ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.

ಚಿತ್ರದುರ್ಗದ ನಿವಾಸಿ ಸಾದಿಕ್ (22) ಮೃತ ಯುವಕ. ಹಗ್ಗದಿಂದ ತಪ್ಪಿಸಿ ಓಡಿಹೋದ ಎಮ್ಮೆಯನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಸಾದಿಕ್ ಗೆ ಎಮ್ಮೆ ತಿವಿದಿದೆ.

ನಿನ್ನೆ ಸಂಜೆ ಮೊಗ್ರಾಲ್ ಪುತ್ತೂರಿನಲ್ಲಿ ಕಸಾಯಿಖಾನೆಗೆ ತಂದ ಎಮ್ಮೆಯನ್ನು ಇಳಿಸುತ್ತಿದ್ದಾಗ ಅದು ಹಗ್ಗ ಮುರಿದು ಓಡಿ ಹೋಗಿದೆ.ಎಮ್ಮೆಯನ್ನು ಹಿಡಿಯಲು ಹೋದ ಸಾದಿಕ್ಗೆ ಕೊಂಬಿನಿಂದ ತಿವಿದಿದೆ.

ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡಿದ್ದ ಸಾದಿಕ್ನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!