ಭಾರತೀಯ ಯುವ ಉದ್ಯಮಿ ಕತಾರ್‌ನಲ್ಲಿ ಶವವಾಗಿ ಪತ್ತೆ
ದೋಹಾ: ಕತಾರ್‌ನ ದೋಹದಲ್ಲಿ ವ್ಯವಹಾರ ಮಾಡುತ್ತಿದ್ದ ಭಾರತೀಯ ಯುವ ಉದ್ಯಮಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಕೇರಳದ ಉದ್ಯಮಿ ನಬೀಲ್(29) ದೋಹಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇನ್ನು ನಬೀಲ್ ತ್ರಿಶೂರ್ನ ಚೆಮ್ಮಪ್ಪಿಲ್ಲಿಯ ಪೊಕಲ್ ಮನೆತನದ ದಿವಂಗತ ಶಂಸುದ್ದೀನ್ ಮತ್ತು ನೂರ್ ಜಹಾನ್ ಪುತ್ರನಾಗಿದ್ದು ಕಳೆದ ಕೆಲ ವರ್ಷಗಳಿಂದ ದೋಹದಲ್ಲಿ ವ್ಯವಹಾರ ಮಾಡಿಕೊಂಡಿದ್ದ ಎನ್ನಲಾಗಿದೆ.
ಇದೀಗ ನೆಬೀಲ್ ಅವರ ನಿವಾಸದಲ್ಲೇ ಶವವಾಗಿ ಪತ್ತೆಯಾಗಿದ್ದು, ಕತಾರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.




