ಸ್ಕ್ರೂಡ್ರೈವರ್‌ನಿಂದ ಯುವಕನ ಎದೆಗೆ ಚುಚ್ಚಿ ಬರ್ಬರ ಹತ್ಯೆ
ಬೆಳಗಾವಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ದುಷ್ಕರ್ಮಿಗಳು ಸ್ಕ್ರೂಡ್ರೈವರ್‌ನಿಂದ ಯುವಕನ ಎದೆಗೆ ಚುಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿರುವ ಮಚ್ಚೆ ಬಳಿ ಯಳ್ಳೂರ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಮಜಗಾಂವ ಗ್ರಾಮದ ಪ್ರತೀಕ್ ಲೋಹಾರ್ (21) ಹತ್ಯೆಯಾದ ಯುವಕ.
ಬೆಳಗಾವಿ ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಹೋಗುವಾಗ ಹತ್ಯೆ ಮಾಡಲಾಗಿದೆ.
ಪ್ರತೀಕ್ ಸ್ನೇಹಿತನ ಜೊತೆಗೆ ಕೆಲವರು ಜಗಳ ಆಡುತ್ತಿದ್ದರು.
ಈ ವೇಳೆ ಜಗಳ ಬಿಡಿಸಲು ಹೋಗಿದ್ದ ಪ್ರತೀಕ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.




