May 14, 2026

ನಟಿಗೆ ಮಾಜಿ ಪ್ರಿಯಕರ ಹಲ್ಲೆ: ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅನಿಕಾ ವಿಜಯಿ

0
image_editor_output_image703603325-1678168850774.jpg

ಹೈದರಾಬಾದ್ :ಮಲಯಾಳಂ ನಟಿ ಅನಿಕಾ ವಿಜಯಿ ವಿಕ್ರಮನ್ ತಮ್ಮ ಮಾಜಿ ಪ್ರಿಯಕರ ಹಲ್ಲೆ ಮಾಡಿರುವ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಾಜಿ ಪ್ರಿಯಕರ ಅನೂಪ್ ಪಿಳ್ಳೈ ಹಲ್ಲೆ ಮಾಡಿರುವ ಪೋಟೊಗಳನ್ನು ಅನಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದು, ಇದರಲ್ಲಿ ಮೂಗು, ಕಣ್ಣುಗಳಿಗೆ ಗಂಭೀರ ಗಾಯವಾಗಿರುವುದು ಕಂಡುಬಂದಿದೆ.

ಈ ಘಟನೆಗಳ ಹೊರತಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿದೆ.

ಅಲ್ಲದೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ. ನಾನು ನನ್ನ ಮಾಜಿ ಪ್ರಿಯಕರ ಹಲ್ಲೆ ಮಾಡುವುದಕ್ಕೆ ಮೊದಲು ನಾನು ತೆಗೆದ ಕೊನೆಯ ಚಿತ್ರವನ್ನು ನಿಮಗೆ ತೋರಿಸುತ್ತಿದ್ದೇನೆ.

ಇದರಲ್ಲಿ ನಾನು ನನ್ನ ಹೇರ್ ಸ್ಟೈಲ್ ತೋರಿಸಲು ತುಂಬಾ ಉತ್ಸುಕನಾಗಿದ್ದೆ. ಅದು ಈಗ ಹಳೆಯದಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ವಾರದಿಂದ ನಾನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲು ಶುರು ಮಾಡುತ್ತೇನೆ ಎಂದು ಬರೆದಿದ್ದಾರೆ.

ನಟಿ ಫೋಟೊ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪೋಸ್ಟ್ ವೈರಲ್ ಆಗಿದ್ದು, ನಟಿಯ ಮೇಲೆ ಆಗಿರುವ ಹಲ್ಲೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!