May 14, 2026

ಕಾರ್ಕಳ: ಪಾದಚಾರಿ ಮಹಿಳೆಗೆ ಲಾರಿ ಢಿಕ್ಕಿ

0
image_editor_output_image-872762978-1678084627235.jpg

ಕಾರ್ಕಳ: ಪಾದಚಾರಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಮಂಜರಪಲ್ಕೆ ಸಮೀಪ ಕೆದಿಂಜೆಯಲ್ಲಿ ಇಂದು ನಡೆದಿದೆ.

ಗಾಯಗೊಂಡ ಮಹಿಳೆಯನ್ನು ನಂದಳಿಕೆಯ ಗೀತಾ ದೇವಾಡಿಗ ಎಂದು ಗುರುತಿಸಲಾಗಿದೆ. ಘಟನೆ ನಡೆದ ತಕ್ಷಣ ಲಾರಿ ಸಮೇತ ಪರಾರಿಯಾಗಲು ಚಾಲಕನು ಯತ್ನಿಸುತ್ತಿದ್ದಾಗ ಸ್ಥಳೀಯರು ಲಾರಿಯನ್ನು ತಡೆಹಿಡಿದ್ದಾರೆ.

ಆದರೆ ಚಾಲಕ ಲಾರಿಯಿಂದ ಇಳಿದು ಪಕ್ಕದ ಗುಡ್ಡದಿಂದ ಓಡಿ ಪರಾರಿಯಾಗಿದ್ದಾನೆ. ಸದ್ಯ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!