May 14, 2026

ಕೋತಿಗಳ ಗುಂಪು ದಾಳಿ‌ ನಡೆಸಿದಾಗ ಛಾವಣಿ ಮೇಲಿಂದ ಬಿದ್ದು ಬಾಲಕಿ ಸಾವು

0
image_editor_output_image-1354710382-1678077731415.jpg

ಲಕ್ನೋ: ಕೋತಿಗಳ ಗುಂಪು ಅಟ್ಟಾಡಿಸಿಕೊಂಡು ಬಂದಾಗ, ಹೆದರಿ ತಪ್ಪಿಸಿಕೊಳ್ಳಲು ಯತ್ನಿಸಿ ಬಾಲಕಿಯೊಬ್ಬಳು ಛಾವಣಿ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ ಜಿಲ್ಲೆಯಲ್ಲಿ ನಡೆದಿದೆ.

ಸಿನೌಲಿ ಗ್ರಾಮದ ರಿಯಾ ಎಂಬ 13 ವರ್ಷದ ಬಾಲಕಿ ಬಾಗ್‌ಪತ್ ಜಿಲ್ಲೆಯ ಜೋತ್ವಾಲಿಯಲ್ಲಿರುವ ತನ್ನ ತಾಯಿಯ ಅಜ್ಜನ ಮನೆಯಲ್ಲಿ ವಾಸಿಸುತ್ತಿದ್ದಳು.

ಭಾನುವಾರ ಟೆರೇಸ್‌ನಲ್ಲಿದ್ದ ವೇಳೆ ಆಕೆಯ ಮೇಲೆ ಮಂಗಗಳ ದಂಡು ಏಕಾಏಕಿ ಸುತ್ತುವರಿದು ದಾಳಿ ಮಾಡಿವೆ.

ಇದರಿಂದ ಹೆದರಿದ ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿ ಆಯಾತಪ್ಪಿ ಕೆಳಗೆ ಬಿದ್ದಿದ್ದಾಳೆ.

ಛಾವಣಿಯಿಂದ ಕೆಳಗೆ ಬಿದ್ದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕುಟುಂಬಸ್ಥರು ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!