February 3, 2026

ವಿದೇಶಿ ಮದ್ಯ ಕಳ್ಳಸಾಗಣೆ: ಮಹಿಳಾ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಉಪಾಧ್ಯಕ್ಷೆ ಬಂಧನ

0
image_editor_output_image1678523980-1677820637960.jpg

ಗಾಂಧಿನಗರ: ವಿದೇಶಿ ಮದ್ಯದ ಸರಕನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

10 ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿರುವ ಗುಜರಾತ್ ಪೊಲೀಸರು ಗುಜರಾತ್‌ನ ಮಹಿಳಾ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಉಪಾಧ್ಯಕ್ಷೆ ಮೇಘನಾ ಪಟೇಲ್ ಅವರನ್ನ ಬಂಧಿಸಿದ್ದಾರೆ.

ಅಪರಿಚಿತರ ಗುಂಪೊಂದು ಬೊಲೆರೋ ಕಾರಿನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕಾರು ಚಾಲಕನನ್ನು ಹಿಡಿದು ವಿಚಾರಿಸಿದಾಗ ಮೇಘನಾ ಪಟೇಲ್‌ಗಾಗಿ 7.5 ಲಕ್ಷ ರೂ.ಗಳ ವಿದೇಶಿ ಸರಕನ್ನು ತರಲಾಗಿದೆ ಎಂಬುದು ತಿಳಿದುಬಂದಿತ್ತು.

Leave a Reply

Your email address will not be published. Required fields are marked *

error: Content is protected !!