May 12, 2026

ಉಳ್ಳಾಲ: ಎರಡು ಮೀನಿನ ದೋಣಿಗಳಿಗೆ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ

0
IMG-20230302-WA0032.jpg

ಉಳ್ಳಾಲ: ಸೋಮೇಶ್ವರ ಕಡಲ ಕಿನಾರೆಯಲ್ಲಿಟ್ಟಿದ್ದ ಎರಡು ದೋಣಿಗಳಿಗೆ ಬೆಂಕಿ ತಗುಲಿದ್ದು ದೋಣಿ ಮತ್ತು ಮೀನಿನ ಬಲೆ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಕಿಡಿಗೇಡಿಗಳೇ ಬೆಂಕಿ ಹಾಕಿದ್ದಾರೆಂದು ಶಂಕಿಸಲಾಗಿದ್ದು, ಸೋಮೇಶ್ವರದ ಮೀನುಗಾರರಾದ ಅನಿಲ್ ಮತ್ತು ಶೇಖರ್ ಎಂಬವರಿಗೆ ಸೇರಿದ ನಾಡ ದೋಣಿಗೆ ಗುರುವಾರ ಮಧ್ಯಾಹ್ನ ಬೆಂಕಿ ತಗುಲಿದೆ.

ಸೋಮೇಶ್ವರ ಬಾಸಿತ್ತಾಯರ ಬೈಲಿನ ಸಮುದ್ರ ಕಿನಾರೆಯಲ್ಲಿ ಮೀನುಗಾರರು ನಾಡ ದೋಣಿಯನ್ನ ನಿಲ್ಲಿಸಿದ್ದರು. ಗುರುವಾರ ಮಧ್ಯಾಹ್ನ‌ ದೋಣಿಗಳು ಬೆಂಕಿಗಾಹುತಿಯಾಗಿದ್ದು ಬೆಂಕಿಯ ಕೆನ್ನಾಲಿಗೆ ಸಮೀಪದ ಪೊದೆಗಳಿಗೂ ವ್ಯಾಪಿಸಿದೆ. ಸ್ಥಳೀಯರು ಬೆಂಕಿಯನ್ನ ನಂದಿಸಿದ್ದಾರೆ. ಪ್ರವಾಸಿಗರು ಎಸೆದ ಸಿಗರೇಟ್ ಅಥವಾ ಕಿಡಿಗೇಡಿಗಳೇ ಬೆಂಕಿ ಹಚ್ಚಿರುವ ಬಗ್ಗೆ ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!