March 21, 2026

ಕಾರ್ಕಳ: ತಾಯಿ ಮತ್ತು ಮಗು ನಾಪತ್ತೆ: ದೂರು ದಾಖಲು

0
IMG-20230228-WA0018.jpg

ಕಾರ್ಕಳ: ಕಾರ್ಕಳ ತಾಲೂಕು ಗಣಪತಿಕಟ್ಟೆ ದಿಡಿಂಬಿರಿ ನಿವಾಸಿಗಳಾದ ತಾಯಿ ಮತ್ತು ಮಗು ನಾಪತ್ತೆಯಾದ ಘಟನೆ ನಡೆದಿದೆ.

ರಂಗಿತಾ (23) ಎಂಬ ಮಹಿಳೆಯು ತನ್ನ 3 ವರ್ಷದ ಮಗಳಾದ ಶಾನ್ವಿಕಾಳೊಂದಿಗೆ ಫೆಬ್ರವರಿ 18ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

150 ಸೆಂ.ಮೀ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!