ಪುತ್ತೂರಿನ ಆರ್ಯಾಪು ಗ್ರಾಪಂ ಉಪಚುನಾವಣೆ: BJP ಬೆಂಬಲಿತ ಅಭ್ಯರ್ಥಿಗೆ ಗೆಲುವು

ಪುತ್ತೂರು: ಸದಸ್ಯರೊಬ್ಬರ ನಿಧನದ ಹಿನ್ನಲೆಯಲ್ಲಿ ಆರ್ಯಾಪು ಗ್ರಾಪಂನ ವಾರ್ಡ್ 1ಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ಡಿ.ಬಿ. ಅವರು ಗೆಲುವು ಸಾಧಿಸಿದ್ದಾರೆ.
ಯತೀಶ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೊಟ್ಲ ಅವರಿಂದ 171 ಮತಗಳ ಅಂತರದಿಂದ ಗೆಲುವು ಪಡೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಒಟ್ಟು 836 ಮತದಾನವಾಗಿತ್ತು. ಈ ಪೈಕಿ ಯತೀಶ್ ಅವರು 498 ಮತಗಳನ್ಮು ಪಡೆದುಕೊಂಡಿದ್ದಾರೆ.
ಪ್ರಜ್ವಲ್ ರೈ ತೊಟ್ಲ ಅವರು 327 ಮತಗಳನ್ನು ಪಡೆದುಕೊಂಡಿದ್ದಾರೆ. 11 ಮತಗಳು ಅಸಿಂಧುಗೊಂಡಿತ್ತು.