March 21, 2026

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ: ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲ್‌ ಸಾವು

0
image_editor_output_image-1248098834-1677312184350.jpg

ಮಧ್ಯಪ್ರದೇಶ: ವಿದ್ಯಾರ್ಥಿ ಹಚ್ಚಿದ ಬೆಂಕಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಂದೋರ್‌ನ ಖಾಸಗಿ ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲ್‌ ಶನಿವಾರ ನಿಧನರಾಗಿದ್ದಾರೆ.

ಫೆಬ್ರುವರಿ 20ರಂದು ನಡೆದಿದ್ದ ಘಟನೆಯಲ್ಲಿ ಶೇಕಡ 80ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ ವಿಮುಕ್ತಿ ಶರ್ಮಾ ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ನಸುಕಿನ 4 ಗಂಟೆಯಲ್ಲಿ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.

54 ವರ್ಷದ ವಿಮುಕ್ತಿ ಶರ್ಮಾ ಅವರು ಮನೆಗೆ ತೆರಳುತ್ತಿದ್ದ ವೇಳೆ ಬಿಎಂ ಫಾರ್ಮಸಿ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿತ್ತು.

ಅಂಕ ಪಟ್ಟಿ ನೀಡುವಲ್ಲಿ ವಿಳಂಬವಾಗಿದ್ದ ವಿಮುಕ್ತಿ ಶರ್ಮಾ ಅವರೊಂದಿಗೆ ವಾಗ್ವಾದ ನಡೆಸಿದ್ದ ಆರೋಪಿ, ಮಾಜಿ ವಿದ್ಯಾರ್ಥಿಯೂ ಆದ ಅಶುತೋಷ್ ಶ್ರೀವಾಸ್ತವ (24) ನಂತರ ಪೆಟ್ರೋಲ್ ಸುರಿದು ಸಿಗರೇಟ್ ಲೈಟರ್‌ನಿಂದ ಬೆಂಕಿ ಹಚ್ಚಿದ್ದ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀವಾಸ್ತವನನ್ನು ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!