March 21, 2026

ಚಿಕ್ಕಮಗಳೂರು|ಭಾರಿ ಪ್ರಮಾಣದ ಅಕ್ರಮ ಬಂದೂಕು, ರಿವಾಲ್ವರ್ ಪತ್ತೆ: 6 ಮಂದಿ ಆರೋಪಿಗಳ ಬಂಧನ

0
image_editor_output_image530225998-1677152700715.jpg

ಚಿಕ್ಕಮಗಳೂರು :ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಂದೂಕು ದುರಸ್ತಿಪಡಿಸುವ ಅಂಗಡಿಗಳಿಗೆ ದಾಳಿ ನಡೆಸಿದ ಪೊಲೀಸರು ಭಾರಿ ಪ್ರಮಾಣದ ಅಕ್ರಮ ಬಂದೂಕು, ರಿವಾಲ್ವರ್ ಪತ್ತೆ ಹಚ್ಚಿದ್ದು ಆರು ಜನರನ್ನು ಬಂಧಿಸಿದ್ದಾರೆ.

ಬಾಳೆಹೊನ್ನೂರು ,ಬಾಳೂರು, ಕಳಸ ಹಾಗು ಎನ್ ಆರ್ ಪುರ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ. ಪರವಾನಿಗೆ ರಹಿತ 41 , ಪರವಾನಿಗೆ ಸಹಿತ 10 ಬಂದೂಕು, ಎರಡು ರಿವಾಲ್ವರ್,22 ರೈಫಲ್ ಗುಂಡು,40 ಬುಕ್ ಶಾಟ್ ಗುಂಡು, ಬಂದೂಕು ನಳಿಕೆ, ಕಾರ್ಟ್ರೆಜ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಸಂಬಂಧ ನೇತ್ರಕುಂಡ ಎಸ್ಟೇಟಿನ ಸದಾಶಿವಾಚಾರ್, ಬಾಳೂರಿನ ಸುಧಾಕರ್ ಆಚಾರಿ , ಬಾಳೆಹೊನ್ನೂರಿನ ರಾಮಚಂದ್ರ ಆಚಾರಿ, ಮಾವಿನಕೆರೆಯ ಸುಂದರ, ಗಂಗಾಧರ, ಆಡುವಳ್ಳಿಯ ಶಿವರಾಜ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!