ತಮಿಳು ನಟ ಪ್ರಭು ಆಸ್ಪತ್ರೆಗೆ ದಾಖಲು

ತಮಿಳುನಾಡು: ತಮಿಳು ನಟ ಪ್ರಭು ತೆಲುಗು, ಕನ್ನಡ ಸೇರಿದಂತೆ ಸೌತ್ ಸಿನಿಮಾ ಪ್ರೇಕ್ಷಕರಿಗೆ ಪರಿಚಿತರು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಖ್ಯಾತ ನಟ ಪ್ರಭು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಅವರನ್ನು ಚೆನ್ನೈನ ಕೋಡಂಬಾಕ್ಕಂನಲ್ಲಿರುವ ಮೆಡ್ವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಭು ಚೆನ್ನೈನ ಆಸ್ಪತ್ರೆಗೆ ತೆರಳಿದ್ದರು. ಕೆಲ ದಿನಗಳಿಂದ ಕಿಡ್ನಿ ಸಮಸ್ಯೆ ಇದೆ. ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದ ನಂತರ, ಮೂತ್ರಪಿಂಡದ ಕಲ್ಲುಗಳಿಂದ ನೋವು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.