March 21, 2026

ಕೊಡಗು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ KSRTC ಬಸ್: 40 ಮಂದಿ‌ ಪ್ರಯಾಣಿಕರಿಗೆ ಗಾಯ

0
image_editor_output_image-766211661-1676960387214.jpg

ಕೊಡಗು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ ಟಿಸಿ ಬಸ್ ಮಂಗಳವಾರ ಇಲ್ಲಿನ ವಿರಾಜಪೇಟೆ ತಾಲ್ಲೂಕಿನ ಅಮ್ಮತಿ ಕಾವಾಡಿ ಕಂದಕಕ್ಕೆ ಉರುಳಿದೆ.

ಚಾಲಕ ಸೇರಿದಂತೆ ಬಸ್ ನಲ್ಲಿ ಇದ್ದ ಸುಮಾರು 40 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕೇರಳ ರಾಜ್ಯದ ಎರ್ನಾಕುಲಂನಿಂದ ವಿರಾಜಪೇಟೆ ಮಾರ್ಗವಾಗಿ ಹಾಸನಕ್ಕೆ ಈ ಬಸ್ ತೆರಳುತಿತ್ತು. ನಸುಕಿನ 4 ಗಂಟೆಗೆ ವಿರಾಜಪೇಟೆ ಬಸ್ ನಿಲ್ದಾಣ ದಿಂದ ಬಸ್ ಹೊರಟಿತ್ತು. ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!