ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ, ವಿದೇಶಿ ಕರೆನ್ಸಿ ಸಾಗಾಟ: 16,25,000 ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಮತ್ತು ವಿದೇಶಿ ಕರೆನ್ಸಿಯನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
15 ದಿನದಲ್ಲಿ ಒಟ್ಟು ಐದು ಪುರುಷ ಪ್ರಯಾಣಿಕರಿಂದ 91,35,850 ರೂಪಾಯಿ ಮೌಲ್ಯದ 16,25,000 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಫೆಬ್ರವರಿ 1 ರಿಂದ 15 ರವರೆಗಿನ ಅವಧಿಯಲ್ಲಿ ದುಬೈ ಮತ್ತು ಬಹ್ರೇನ್‌ನಿಂದ ಬಂದ ಪ್ರಯಾಣಿಕರಿಂದ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಟ್ರಾಲಿ ಬ್ಯಾಗ್‌ನ ಹಿಡಿಕೆಯಲ್ಲಿ, ಗುದನಾಳದಲ್ಲಿ, ಬಾಯಿಯ ಕುಳಿಯಲ್ಲಿ ಮತ್ತು ಪೆಟ್ಟಿಗೆಯೊಳಗೆ ತೆಳುವಾದ ಪೇಸ್ಟ್ ಪದರದ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ.
ವಿದೇಶಿ ಕರೆನ್ಸಿ ವಶ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂ.IX 383 ಮೂಲಕ ಭಾರತದಿಂದ ದುಬೈಗೆ ವಿದೇಶಿ ಕರೆನ್ಸಿಗಳ ಕಳ್ಳಸಾಗಣೆಯನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಒಬ್ಬ ಪುರುಷ ಪ್ರಯಾಣಿಕರಿಂದ 5100 ಯುಎಸ್ ಡಲರ್ ಮತ್ತು 2420 ಪೌಂಡ್ ಸ್ಟರ್ಲಿಂಗ್ ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.





