May 15, 2026

ರಾಜ್ಯ ಬಜೆಟ್: ಕಿವಿಗೆ ಕೇಸರಿ ಬಣ್ಣದ ಹೂವಿಟ್ಟು ಸದನಕ್ಕೆ ಬಂದ ಕಾಂಗ್ರೆಸ್ ಸದಸ್ಯರು

0
image_editor_output_image-2050736444-1676611553622.jpg

ಬೆಂಗಳೂರು: ಈ ಸರ್ಕಾರದ ಅವಧಿಯ ಕೊನೆಯ ಬಜೆಟ್ ಮಂಡನೆ ಆರಂಭಕ್ಕೂ ಮೊದಲೇ ಸದನದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಗದ್ದಲ ಏರ್ಪಟ್ಟ ಪ್ರಸಂಗ ನಡೆಯಿತು.

ತನ್ನ ಎರಡನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಓದಲು ಆರಂಭಿಸುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿವಿಗೆ ಇರಿಸಿದ ಹೂವಿನ ಪ್ರಸ್ತಾಪವಾಯಿತು.

ಸಿದ್ದರಾಮಯ್ಯ ಅವರು ಕೇಸರಿ ಬಣ್ಣದ ಹೂವನ್ನು ಕಿವಿಮೇಲೆ ಇರಿಸಿಕೊಂಡಿದ್ದು ಸದನದ ಗಮನ ಸೆಳೆಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, “ಇಷ್ಟು ದಿನ ಜನರ ಕಿವಿಗೆ ಇವರು ಹೂ ಇಟ್ಟಿದ್ದರು, ಈಗ ಜನರೇ ಅವರ ಕಿವಿಗೆ ಹೂ ಇಟ್ಟಿದ್ದಾರೆ, ಮುಂದೆಯೂ ಹಾಗೆ ಮಾಡುತ್ತಾರೆ’ ಎಂದು ಲೇವಡಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!