February 4, 2026

ವಿಟ್ಲ: ಕನ್ಯಾನ ಚೆಡವು ದುಲ್ ಫುಖಾರ್ ಸೇವಾ ಟ್ರಸ್ಟ್ 23ನೇ ವಾರ್ಷಿಕೋತ್ಸವ

0
IMG-20230216-WA0024.jpg


ವಿಟ್ಲ: ಕನ್ಯಾನ ಚೆಡವು ದುಲ್ ಫುಖಾರ್ ಸೇವಾ ಟ್ರಸ್ಟ್ ಇದರ 23 ನೇ ವಾರ್ಷಿಕೋತ್ಸವ ಬುಧವಾರ ರಾತ್ರಿ ಕನ್ಯಾನ ಮಸೀದಿ ವಠಾರದಲ್ಲಿ ಕನ್ಯಾನ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಖಾಝಿ ಅಸ್ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ಕೊಯಮ್ಮತಂಙಳ್ ಅಲ್ ಬುಖಾರಿ ಕೂರತ್, ಅಸ್ಸಯ್ಯಿದ್ ಬದ್ರುಸ್ಸಾದಾತ್ ಇಬ್ರಾಹೀಮುಲ್ ಖಲೀಲ್ ತಂಙಳ್ ಅಲ್ ಬುಖಾರಿ ಕಡಲುಂಡಿ ಕೇರಳ, ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಶೈಖುನಾ ಕನ್ಯಾನ ಉಸ್ತಾದ್ ದುವಾಃ ಆಶೀರ್ವಚನ ನೀಡಿದರು. ಅಬ್ದುಲ್ ಹಕೀಂ ಮದನಿ ಉಸ್ತಾದ್ ಕರೋಪಾಡಿ ಬಹು ಜಬ್ಬಾರ್ ಸಖಾಫಿ ಪಾತೂರು ಪ್ರಭಾಷಣ ಮಾಡಿದರು.

ಮಾಜಿ ಸಚೀವ ಬಿ ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ , ಕನ್ಯಾನ ಗ್ರಾ.ಪಂ ಅಧ್ಯಕ್ಷ ಕೆ ಪಿ ಅಬ್ದುಲ್ ರಹಿಮಾನ್, ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬಾಳ್ತ್ರೋಡಿ, ಡಿ ಕೆ ಇಬ್ರಾಹಿಂ ಶಾ, ಎಂ ಕೆ ಮಹಮ್ಮದ್ ಕುಂಞಿ ಹಾಜಿ, ಅಧ್ಯಕ್ಷರು ದುಲ್ ಫುಖಾರ್ ಸೇವಾ ಟ್ರಸ್ಟ್ ಅಧ್ಯಕ್ಷ ಆಸಿಫ್ ಬನಾರಿ,ರಹೀಂ ಚೆಡವು, ಇಬ್ರಾಹಿಂ ಖಲೀಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!