February 4, 2026

ಬಂಟ್ಟಾಳ: ಕಬ್ಬಿಣದ ಸೆಂಟ್ರಿಂಗ್ ಶೀಟ್, ಅಡಿಕೆ ಕಳವು: ಇಬ್ಬರು ಆರೋಪಿಗಳ ಬಂಧನ

0
IMG-20230216-WA0021.jpg

ಬಂಟ್ವಾಳ : ನಿರ್ಮಾಣದ ಹಂತದ ಕಟ್ಟಡದ ಬಳಿ ಹಾಕಿದ್ದ 97,900/ ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ 90,000/- ರೂಪಾಯಿ ಮೌಲ್ಯದ 401 ಕೆ.ಜಿ. ಅಡಿಕೆ ಕಳವು ಮಾಡಿದ ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿರುವ ಘಟನೆ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಎಂಬಲ್ಲಿ ನಡೆದಿದೆ.

ಬಂಧಿತರನ್ನು ತುಂಬೆ ಗ್ರಾಮದ ಬೊಳ್ಳಾರಿನಿವಾಸಿ ಮೊಹಮ್ಮದ್ ಅನ್ಸಾಫ್ (34 ), ಮದಕ ನಿವಾಸಿ ನವಾಜ್ (24) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಕಳವು ಮಾಡಿದ 97,900/- ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಆರೋಪಿಗಳು ಫೆ.12 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ 21 ಗೋಣಿ ಚೀಲಗಳಲ್ಲಿ 90,000/- ರೂಪಾಯಿ ಮೌಲ್ಯದ 401 ಕೆ.ಜಿ. ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!