ಪುತ್ತೂರು: ರೈಲ್ವೇ ನಿಲ್ದಾಣದ ಸಮೀಪ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ: ರೈಲ್ವೇ ಪೊಲೀಸರಿಂದ ಪರಿಶೀಲನೆ
ಪುತ್ತೂರು: ಕಬಕ -ಪುತ್ತೂರು ರೈಲ್ವೇ ನಿಲ್ದಾಣದ ಸಮೀಪ ಟ್ರ್ಯಾಕ್ ನ ಬಲ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.
ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಸಾವನ್ನಪ್ಪಿ ಸುಮಾರು ದಿನಗಳೇ ಕಳೆದಿದ್ದು, ಮೃತದೇಹ ಕೊಳೆತ ಕಾರಣ ಸರಿಯಾದ ರೀತಿಯ ಗುರುತು ಸಹ ಪತ್ತೆಯಾಗುತ್ತಿಲ್ಲ.
ಘಟನಾ ಸ್ಥಳಕ್ಕೆ ಪೊಲೀಸರು, ರೈಲ್ವೇ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.




