February 2, 2026

ಉಪ್ಪಿನಂಗಡಿ: ನಿಷೇಧಿತ ಮಾದಕ ದೃವ್ಯ ಸಾಗಾಟ, ಆರೋಪಿಯ ಬಂಧನ

0
image_editor_output_image1217768646-1676007621097.jpg

ಉಪ್ಪಿನಂಗಡಿ: ನಿಷೇಧಿತ ಮಾದಕ ದೃವ್ಯ ಎಂ.ಡಿ.ಎಂ.ಎ.ಯನ್ನು ಸಾಗಿಸುತ್ತಿದ್ದ ಆರೋಪದಡಿ ಬೆಳಂದೂರು ನಿವಾಸಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕಿನ ಬೆಳಂದೂರು ದೇವಸ್ಯ ನಿವಾಸಿ ಮುಹಮ್ಮದ್‌ ನಿಝಾರ್‌ (22) ಬಂಧಿತ ಆರೋಪಿ.

ಈತ ಫೆ. 7ರಂದು ಮಾರುತಿ ಕಾರಿನಲ್ಲಿ ಎಂ.ಡಿ.ಎಂ.ಎ.ಯನ್ನು ಸಾಗಿಸುತ್ತಿದ್ದ ಸಂದರ್ಭ 34 ನೆಕ್ಕಿಲಾಡಿಯ ಬೊಳುವಾರು ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈತ ಪ್ಲಾಸ್ಟಿಕ್‌ ಕವರ್‌ವೊಂದರಲ್ಲಿ 14.4 ಗ್ರಾಂ ಎಂ.ಡಿ.ಎಂ.ಎ.ಯನ್ನು ಸಣ್ಣ ಸಣ್ಣ ಪ್ಲಾಸ್ಟಿಕ್‌ನ 9 ಕವರ್‌ಗಳಲ್ಲಿ ಪ್ಯಾಕ್‌ ಮಾಡಿ ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿಟ್ಟು ಸಾಗಿಸುತ್ತಿದ್ದ ಎನ್ನಲಾಗಿದೆ.

ಇದರ ಮೌಲ್ಯ 35 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈತನಿಂದ ಎರಡು ಮೊಬೈಲ್‌ ಸೆಟ್‌, ಮಾರುತಿ ಆಲ್ಟೋ 800 ಕಾರು ಮತ್ತು ಎರಡು ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!