July 5, 2026

ಉಳ್ಳಾಲ: ಮುಕ್ಕಚ್ಚೇರಿ ಸಮುದ್ರ ಕಿನಾರೆಯಲ್ಲಿ ವೃದ್ದೆಯ ಶವ ಪತ್ತೆ
 

0
20230202_190945.jpg

ಉಳ್ಳಾಲ: ಉಳ್ಳಾಲದ ಮುಕ್ಕಚ್ಚೇರಿ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವೃದ್ದೆಯ ಮೃತದೇಹ ಗುರುವಾರ ಪತ್ತೆಯಾಗಿದೆ.

ಸುಮಾರು 60-70 ವರ್ಷದ ಮಹಿಳೆಯ ಶವ ಇದಾಗಿದೆ ಎಂದು ಅಂದಾಜಿಸಲಾಗಿದೆ. ಸೀರೆ ಉಟ್ಟಿರುವ ಮಹಿಳೆ ಗುರುವಾರವೇ ಸಮುದ್ರಕ್ಕೆ ಬಿದ್ದಿರುವ ಸಂಶಯ ವ್ಯಕ್ತವಾಗಿದೆ.

ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮ್ಮರ್‌ ಸ್ಯಾಂಡ್‌ ಹಿಂಭಾಗದಲ್ಲಿ ಶವ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಉಳ್ಳಾಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಗೃಹರಕ್ಷಕ ದಳದ ಸಿಬ್ಬಂದಿ ಮೊಗವೀರಪಟ್ನ ನಿವಾಸಿ ಪ್ರಸಾದ್‌ ಸುವರ್ಣ ಅವರಿಗೆ ಮಾಹಿತಿ ನೀಡಿದ್ದು, ಅವರು ಖುದ್ದಾಗಿ ಸಮುದ್ರದಲ್ಲಿ ಈಜಿ ಮೃತದೇಹವನ್ನು ದಡಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!