July 6, 2026

ಪೆರ್ಲ: ರಬ್ಬರ್ ಎಸ್ಟೇಟ್‌ನ ಶೆಡ್‌‌ನೊಳಗೆ ಮಹಿಳೆಯ ಶವ ಪತ್ತೆ: ಪತಿಯೇ ಕೊಲೆ ಮಾಡಿರುವ ಶಂಕೆ

0
20230201_184905.jpg

ಪೆರ್ಲ: ಪೆರ್ಲ ಸಮೀಪದ ಏಳ್ಕಾನ ಶೇಣಿ ಮಂಞಾರೆ ಎಂಬಲ್ಲಿ ರಬ್ಬರ್ ಎಸ್ಟೇಟ್ ನ ಶೆಡ್ ನೊಳಗೆ ಮಹಿಳೆಯೋರ್ವಳು ಕೊಲೆ ಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಕೊಲ್ಲಂ ಮೂಲದ ನೀತು ಕೃಷ್ಣ ಮೃತಪಟ್ಟವರು.

ಈಕೆಯ ಪತಿ ವಯನಾಡ್ ಮೂಲದ ಆಂಟೋ ಸೆಬಾಸ್ಟಿಯನ್ ಎಂಬಾತ ನಾಪತ್ತೆಯಾಗಿದ್ದು, ಸಂಶಯಕ್ಕೆ ಕಾರಣವಾಗಿದೆ.

ಶೇಣಿ ಮಂಞಾರೆಯ ಸುಮಾರು ಮೂರು ಎಕ್ರೆ ಸ್ಥಳ ಕೊಟ್ಟಾಯಂ ನಿವಾಸಿ ರಿಜೋ ಜೋಸೆಫ್ ಎಂಬವರ ಮಾಲಕತ್ವದಲ್ಲಿದ್ದು ಇಲ್ಲಿಗೆ ಒಂದೂವರೆ ತಿಂಗಳ ಹಿಂದೆ ಈ ದಂಪತಿಗಳು ಇಲ್ಲಿಗೆ ರಬ್ಬರ್ ಟ್ಯಾಪಿಂಗ್ ವೃತ್ತಿಗಾಗಿ ಆಗಮಿಸಿದ್ದರು. ಇವರು ವಾಸಿಸುತ್ತಿದ್ದ ಮನೆ ಸಮೀಪದ ಶೆಡ್ ನಲ್ಲಿ ಇತರ ಕಾರ್ಮಿಕರಾದ ವೆಳ್ಳರಿಕುಂಡುವಿನ ರಿಜೋ ಹಾಗೂ ಬಂಗಾಳಿ ಕಾರ್ಮಿಕರಿಬ್ಬರು ವಾಸವಾಗಿದ್ದರು.
ನೀತು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಪತಿಯಲ್ಲಿ ವಿಚಾರಿಸಿದಾಗ ಊರಿಗೆ ತೆರಳಿದ್ದಾಗಿ ಹೇಳಿದ್ದನು. ಈ ನಡುವೆ ಆದಿತ್ಯವಾರದಿಂದ ಆಂಟೋ ಸೆಬಾಸ್ಟಿಯನ್ ನಾಪತ್ತೆಯಾಗಿದ್ದು, ಬುಧವಾರ (ಇಂದು) ಮಧ್ಯಾಹ್ನ ಮನೆಯೊಳಗಿನಿಂದ ದುರ್ವಾಸನೆ ಬರ ತೊಡಗಿದ್ದು ಇದರಿಂದ ಎಸ್ಟೇಟ್ ಮೆನೇಜರ್ ಹಂಚು ಸರಿಸಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.

ಇನ್ನು ಮಾಹಿತಿ ಯಂತೆ ಸ್ಥಳಕ್ಕೆ ಆಗಮಿಸಿದ ಬದಿಯಡ್ಕ ಪೊಲೀಸರು ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!