ಜ.31 ರಿಂದ ಫೆ. 2 ವರೆಗೆ ಮಾಣಿಲದಲ್ಲಿ ಸ್ವಲಾತ್ ವಾರ್ಷಿಕ ಮತ್ತು ಮೂರು ದಿನಗಳ ಮತಪ್ರಭಾಷಣ: ಡಾ.ಅಬ್ದುಲ್ ರಷೀದ್ ಝೈನಿ ಮುಖ್ಯ ಪ್ರಭಾಷಣ
ಜ.31 ರಿಂದ ಫೆ. 2 ವರೆಗೆ ಮಾಣಿಲದಲ್ಲಿ ಸ್ವಲಾತ್ ವಾರ್ಷಿಕ ಮತ್ತು ಮೂರು ದಿನಗಳ ಮತಪ್ರಭಾಷಣ: ಡಾ.ಅಬ್ದುಲ್ ರಷೀದ್ ಝೈನಿ ಮುಖ್ಯ ಪ್ರಭಾಷಣ
ವಿಟ್ಲ: ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ನಾಯರ್ಮೂಲೆ ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರವಾದಿ ಸ.ಅ ಅವರ ಮೇಲಿನ ಸ್ವಲಾತ್ ಕಾರ್ಯಕ್ರಮದ ವಾರ್ಷಿಕೋತ್ಸವ ಮತ್ತು ಮೂರು ದಿನ ಮತಪ್ರಭಾಷಣ ಜ.31ರಿಂದ ಫೆ.2 ರ ವರೆಗೆ ನಡೆಯಲಿದೆ.
ಕುಂಬೋಳ್ ತಂಙಳ್ ಕುಟುಂಬದ ಕೆ.ಎಸ್.ಶಮೀಮ್ ತಂಙಳ್, ಎಸ್.ವೈ ಎಸ್ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಸೇರಿದಂತೆ ಹಲವು ಪಂಡಿತರು ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾರ್ಯಕ್ರಮದ ಮೊದಲ ದಿನವಾದ ಜನವರಿ 31 ರಂದು ನೌಫಲ್ ಹುದವಿ ಕೊಡುವಳ್ಳಿ ಅವರು “ಜೀವನ ಎಂಬುದೊಂದು ಪರೀಕ್ಷೆ” ಎಂಬ ವಿಷಯದಲ್ಲಿ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.
ಫೆಬ್ರವರಿ 1 ರಂದು ಎಸ್.ವೈ.ಎಸ್ ಕರ್ನಾಟಕ ರಾಜ್ಯಾದ್ಯಕ್ಷ ಡಾ.ಅಬ್ದುಲ್ ರಷೀದ್ ಝೈನಿ ಕಾಮಿಲ್ ಸಖಾಫಿ ಅವರು “ಇಸ್ಲಾಮಿನಲ್ಲಿನ ಹಕ್ಕು ಬಾದ್ಯತೆ”ಗಳ ಬಗ್ಗೆ ಮಾತನಾಡಲಿದ್ದಾರೆ.
ಫೆಬ್ರವರಿ 2 ರಂದು ಕಾರ್ಯಕ್ರಮದ ಕೊನೆಯ ದಿನದಲ್ಲಿ ಕುಂಬೋಳ್ ತಂಙಳ್ ಕುಟುಂಬದ ಕೆ.ಎಸ್.ಶಮೀಮ್ ತಙಳ್ ಭಾಗವಹಿಸಿ ಪ್ರಾರ್ಥನೆ ನಡೆಸಿ, ಪ್ರಭಾಷಣ ಮಾಡಲಿದ್ದಾರೆ.
ಜತೆಗೆ ಪರಿಶುದ್ದ ಖುರಾನ್ ಕಂಠಪಾಟ ಮಾಡಿರುವ ವಿದ್ಯಾರ್ಥಿ ಪ್ರಸಂಗ ಶೈಲಿಯ ಬಾಲಕ ಹಾಫಿಳ್ ಅಬ್ದುಲ್ ಮುನಿಮ್ ಒಟ್ಟಪದವು ಅವರು ಪ್ರಭಾಷಣ ಮಾಡಲಿದ್ದಾರೆ. ಸ್ಥಳೀಯ ಖತೀಬ್ ಸಿದ್ದೀಕ್ ಮದನಿ ನೆಲ್ಯಾಡಿ, ಜಮಾಅತ್ ಕಾರ್ಯದರ್ಶಿ ರಝಾಕ್ ನಾಯರ್ಮೂಲೆ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ, ಪೆರುವಾಯಿ ಖತೀಬ್ ಶರೀಫ್ ಮದನಿ ಉಸ್ತಾದ್, ಮಾಜಿ ಖತೀಬ್ ಅಬ್ದುಲ್ಲ ಮುಸ್ಲಿಯಾರ್, ಪಿ.ಎಂ ಮಹಮ್ಮದ್ ಶರೀಫ್ ಸಖಾಪಿ, ಅಬ್ದುಲ್ ಗಫೂರ್ ಹನೀಫೀ ಇಬ್ರಾಹಿಂ ಕಾಮಿಲ್ ಸಖಾಪಿ ಕೊಡಂಗೆ, ಮತ್ತು ಉಮರಾಕಳು ಭಾಗವಹಿಸಲಿದ್ದಾರೆ. ಜಮಾಅತ್ ಅಧ್ಯಕ್ಷ ಖಾದ್ರಿಕುಞ್ಞಿ ಹಾಜಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವು ಪ್ರತಿದಿನ ಸಂಜೆ 7 ಗಂಟೆಗೆ ಆರಂಭವಾಗಿ 10 ಗಂಟೆಗೆ ಮುಗಿಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.




