September 20, 2024

ಕಲ್ಲಡ್ಕ: ಮುನೀರುಲ್ ಇಸ್ಲಾಂ ಮದ್ರಸದಲ್ಲಿ ಶಿಕ್ಷಕ ರಕ್ಷಕ ಸಭೆ

0

ಕಲ್ಲಡ್ಕ: ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಸಹಕಾರದಲ್ಲಿ ಮುನೀರುಲ್ ಇಸ್ಲಾಂ ಮದ್ರಸದಲ್ಲಿ ಶಿಕ್ಷಕ ರಕ್ಷಕ ಸಭೆ ನಡೆಯಿತು.

ಜಗತ್ತಿಗೆ ಪ್ರಪ್ರಥಮವಾಗಿ ಬೋಧಿಸಿದ ಭೊಧನೆ ಓದು ಓದಿಸಿರಿ ಎಂದಾಗಿದೆ. ಅದಾಗಿದೆ ಇಸ್ಲಾಂ ಧರ್ಮದಲ್ಲಿ ಶಿಕ್ಷಣಕ್ಕೆ ಕೊಟ್ಟ ಮಹತ್ವ ಎಂದು ಸಮಸ್ತ ಶಿಕ್ಷಣ ಅಧಿಕಾರಿ ಉಮ್ಮರ್ ದಾರಿಮಿ ಸಾಲ್ಮರ ಹೇಳಿದ್ದಾರೆ.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಬಿ ಮೂಡ ಪದವಿ ಪೂರ್ವ ಕಾಲೇಜು ಉಪನ್ಯಾಸ ಕರಾದ ಅಬ್ದುಲ್ ರಜಾಕ್ ಅನಂತಾಡಿ, ಮಕ್ಕಳಲ್ಲಿ ಪರಿವರ್ತನೆ ಕಾಣುವ ಕಾರ್ಯಚಟುವಟಿಕೆಗಳು ಕಂಡು ಬಂದಲ್ಲಿ ರಕ್ಷಕರು ನಿಗಾ ವಹಿಸಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸ ಸದರ್ ಲತೀಫ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ, ಪ್ರಾಮಾಣಿಕತೆ, ಶಿಸ್ತು, ಗೌರವ, ಬದ್ದತೆ,ಬೋಧಿಸುವ ಮದ್ರಸಕ್ಕೆ ರಕ್ಷಕರು ಬೆನ್ನೆಲುಬಾಗಿ ಮುನ್ನಡೆಸಿರಿ ಎಂದರು.

ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಸಮಾರಂಭದ ಅದ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್, ಮಜೀದ್ ಯಮಾನಿ, ಖಾಸಿಂ ಯಾಮಾನಿ,ನಾಸೀರ್ ಮುಸ್ಲೀಯಾರ್, ನವಾಝ್, ಅಬೂಬಕ್ಕರ್ ಮುರಬೈಲ್, ಖಾಸಿಂ,ಉಪಸ್ಥಿತರಿದ್ದರು.

ಹಾಫಿಲ್ ಇಸ್ಮಾಯಿಲ್ ಹನೀಫಿ ಪ್ರಾರ್ಥಿಸಿದರು. ಆಡಳಿತ ಸಮಿತಿ ಸದಸ್ಯರಾದ ಸಾಧಿಕ್ ಸ್ವಾಗತಿಸಿದರು, ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!