March 20, 2026

ಕಾಳಿಮಾತೆ ಕೈಯಲ್ಲಿ ಸಿಗರೇಟ್ ಪೋಸ್ಟರ್ ವಿವಾದ: ನಿರ್ದೇಶಕಿ ಲೀನಾ ಮಣಿಮೇಗಲೈ ವಿರುದ್ಧ ಯಾವುದೇ ಬಲವಂತದ ಕ್ರಮಬೇಡ ಸುಪ್ರೀಂ ಕೋರ್ಟ್

0
image_editor_output_image-1814684705-1674225679167.jpg

ಚೆನ್ನೈ: ಕಾಳಿಮಾತೆ ಕೈಯಲ್ಲಿ ಸಿಗರೇಟ್ ಕೊಟ್ಟ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕಿ ಲೀನಾ ಮಣಿಮೇಗಲೈ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಿರುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಕಿ ಪರ ಹೇಳಿಕೆ ನೀಡಿದೆ.

ಲೀನಾ ನಿರ್ದೇಶನದಲ್ಲಿ ಮೂಡಿ ಬಂದ ಕಾಳಿ ಸಾಕ್ಷ್ಯ ಚಿತ್ರದ ಪೋಸ್ಟರ್ ನಲ್ಲಿ ಎಲ್.ಜಿ.ಬಿ.ಟಿ.ಕ್ಯೂ ಧ್ವಜ ಹಿಡಿದು ಸಿಗರೇಟು ಸೇದುತ್ತಿರುವಂತೆ ಚಿತ್ರಿಸಲಾಗಿತ್ತು.

ತಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿರುವ ವಿಚಾರಕ್ಕಾಗಿ ಭಾರೀ ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ತಮ್ಮ ಮೇಲಿನ ದೂರುಗಳನ್ನು ವಜಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾದ ಎಫ್.ಐ.ಆರ್ ಗಳನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ಬಲವಂತವಾಗಿ ಏನೂ ಕ್ರಮ ಕೈಗೊಳ್ಳದಂತೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!