March 19, 2026

ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಯಾಂಡಲ್ ವುಡ್ ನಟನ‌ ಬಂಧನ

0
image_editor_output_image-1859599807-1673940696198.jpg

ಬೆಂಗಳೂರು: 3 ವರ್ಷಗಳ ಹಿಂದೆ ತೆರೆಕಂಡ ‘ನ್ಯೂರಾನ್’ ಸಿನಿಮಾದ ನಾಯಕ ಮಂಜುನಾಥ್ ಅಲಿಯಾಸ್ ಸಂಜು ಅರೆಸ್ಟ್ ಆಗಿದ್ದಾನೆ.

ಸಿನಿಮಾ ರಂಗದ ಹೆಸರನ್ನು ದುರುಪಯೋಗ ಪಡಿಸಿಕೊಂಡ ಈತ ಲೊಕ್ಯಾಂಟು ಆ್ಯಪ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನ್ಯೂರಾನ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಈತ ಆನಂತರ ಚಿತ್ರೋದ್ಯಮದಿಂದ ದೂರವಾಗಿ ಹೆಣ್ಣುಮಕ್ಕಳನ್ನು ದಂಧೆಗೆ ಇಳಿಸುವ ಕೆಲಸದಲ್ಲಿ ನಿರತನಾಗಿದ್ದ ಎಂದು ತಿಳಿದು ಬಂದಿದೆ.

ವಿಕಾಸ್ ಪುಷ್ಪಗಿರಿ ನಿರ್ದೇಶನದಲ್ಲಿ ಮೂಡಿ ಬಂದ ‘ನ್ಯೂರಾನ್’ ಸಿನಿಮಾ ಮಂಜುನಾಥ್ ಗೆ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ನೇಹಾ ಪಾಟೀಲ್, ಶಿಲ್ಪಾ ಶೆಟ್ಟಿ ಹಾಗೂ ವೈಷ್ಣವಿ ಮೆನನ್ ಮೂವರು ನಾಯಕಿಯರು ಈ ಸಿನಿಮಾದಲ್ಲಿ ನಟಿಸಿದ್ದರು.

ಮಂಜುನಾಥ್ ಗೆ ಇದು ಮೊದಲ ಸಿನಿಮಾವಾದರೂ, ಸಾಕಷ್ಟು ಖರ್ಚು ಮಾಡಿ ಸಿನಿಮಾ ತಯಾರಿಸಿದ್ದರು ನಿರ್ಮಾಪಕರು. ಆದರೆ, ಮಂಜುನಾಥ್ ಹಿಡಿದ ದಾರಿಯೇ ಬೇರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!