May 21, 2024

ಮಡಿಕೇರಿ: ಕಾರ್ಯಾಚರಣೆ ವೇಳೆ ಕಾಡಾನೆ ಸಾವು

0

ಕೊಡಗು: ಕಾಡಾನೆ ಸೆರೆಹಿಡಿಯುವ ವೇಳೆ ಕಾಡಾನೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಅತ್ತೂರು-ನಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಆನೆಗೆ ಅಂದಾಜು 20 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಅರವಳಿಕೆ ನೀಡಿದ ಬಳಿಕ ಆನೆ ಓಡಲು ಶುರು ಮಾಡಿತ್ತು. ಆಗ ಕಾಫಿ ತೋಟದಲ್ಲಿ ಇದ್ದ 35 ಅಡಿ ಆಳದ ಸಿಮೆಂಟ್ ಅಂಗಳಕ್ಕೆ‌ ಬಿದ್ದು ಆನೆ ಸಾವನ್ನಪ್ಪಿದೆ. ದೇಹದಲ್ಲಿ ಆಂತರಿಕ ಗಾಯಗಳಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ಕಾಡಾನೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಬೆಳಗ್ಗೆಯಿಂದ‌ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಶಾಲನಗರ ಸಮೀಪದ ಆನೆಕಾಡು ಸಮೀಪದ ಮಿನುಕೊಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಪುಂಡಾಟ ಮೆರೆದಿದ್ದ ಕಾಡಾನೆ ಸೆರೆ ಹಿಡಿಯುವ ವೇಳೆ ಈ ಘಟನೆ ನಡೆದಿದೆ. ಕಾಡಾನೆ ಸಾವಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಫಿ ತೋಟದಲ್ಲಿ ಆನೆಗೆ ಅರವಳಿಕೆ ಮದ್ದು ನೀಡಿ ಕೆಲ ಹೊತ್ತಿನಲ್ಲಿ ಗುಂಡಿಗೆ ಬಿದ್ದು ಕಾಡಾನೆ ಸಾವನ್ನಪ್ಪಿದೆ.

Leave a Reply

Your email address will not be published. Required fields are marked *

You may have missed

error: Content is protected !!