ಭಾರತದ ಸಿರಪ್ ಸೇವಿಸಿ ಉಜ್ಬೇಕಿಸ್ಥಾನದ 18 ಮಕ್ಕಳು ಸಾವು

ಹೊಸದಿಲ್ಲಿ : ಭಾರತದಲ್ಲಿ ಸಿದ್ಧಪಡಿಸಲಾ ಗಿ ರುವ ಕೆಮ್ಮಿನ ಸಿರಪ್ ಸೇವಿಸಿ ಹದಿ ನೆಂಟು ಮಂದಿ ಮಕ್ಕಳು ಅಸುನೀಗಿದ್ದಾರೆ ಎಂದು ಉಜ್ಬೇಕಿಸ್ಥಾನ ಸರ ಕಾರ ಹೇಳಿಕೊಂಡಿದೆ.
ಮಾರಿ ಯಾನ್ ಬಯೋ ಟೆಕ್ ಪ್ರೈ.ಲಿ (Marion Biotech Private Limited) ಎಂಬ ಕಂಪೆನಿ ಅದನ್ನು ಸಿದ್ಧಪಡಿ ಸಿದೆ. 2012 ರಲ್ಲಿ ಆ ಕಂಪೆನಿ ಉಜ್ಬೇ ಕಿಸ್ಥಾನ ಸರಕಾರದಿಂದ ಮಾನ್ಯತೆ ಪಡೆದಿ ಕೊಂಡಿತ್ತು.
ಈ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ “ನೋಯ್ಡಾ ಮೂಲದ ಮಾರಿಯಾನ್ ಬಯೋಟೆಕ್ ಪ್ರೈ.ಲಿ ಸಿದ್ಧಪಡಿಸಿದ ಡಾಕ್-1 ಮ್ಯಾಕ್ಸ್ ಕೆಮ್ಮಿನ ಸಿರಪ್ ಅನ್ನು ಮಕ್ಕಳು ಸೇವಿಸಿದ್ದರು. ಆದರೆ, 21 ಮಕ್ಕಳ ಪೈಕಿ 18 ಮಂದಿ ಸಿರಪ್ ತೆಗೆದುಕೊಂಡ ಬಳಿಕ ಉಂಟಾದ ತೊಂದರೆಯಿಂದ ಅಸುನೀ ಗಿ ದ್ದಾರೆ’ ಎಂದು ಹೇಳಿಕೆ ಯಲ್ಲಿ ತಿಳಿ ಸಿದೆ. ಆಸ್ಪತ್ರೆಗೆ ದಾಖಲಾಗು ವುದಕ್ಕಿಂತ ಮೊದಲು ಮಕ್ಕಳು 2-7 ದಿನಗಳ ಕಾಲ ಪ್ರತಿ ದಿನ 3-4 ಬಾರಿ ಸಿರಪ್ ತೆಗೆದುಕೊಂಡಿದ್ದರು ಎಂದು ಕೇಂದ್ರ ಸರಕಾರತಿಳಿಸಿದೆ.