ಗುಂಡಿಕ್ಕಿ ನಟಿ ರಿಯಾ ಕುಮಾರಿಯ ಹತ್ಯೆ
ಜಾರ್ಖಂಡ್: ರಾಜ್ಯದ ಹೆಸರಾಂತ ನಟಿ ರಿಯಾ ಕುಮಾರಿಯನ್ನು ಅಗಂತುಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಸುದ್ದಿ ಜಾರ್ಖಂಡ್ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಈ ಕುರಿತು ಸ್ವತಃ ನಟಿಯ ಪತಿಯೇ ಹೇಳಿಕೆ ನೀಡಿದ್ದು, ತಮ್ಮ ಪುತ್ರಿ ಮತ್ತು ಪತ್ನಿ ಜೊತೆ ರಾಂಚಿಯಿಂದ ಕೊಲ್ಕತ್ತಾಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು.
ಪಶ್ಚಿಮ ಬಂಗಾಳದ ಹೌರಾದಲ್ಲಿ ವಿಶ್ರಾಂತಿಗಾಗಿ ಮಹಿಷ್ರೇಕಾ ಬ್ರಿಡ್ಜ್ ಬಳಿ ಕಾರು ನಿಲ್ಲಿಸಿದ್ದಾರೆ. ಆಗ ಬೈಕಿನಲ್ಲಿ ಬಂದ ಮೂವರು ದರೋಡೆಗೆ ಯತ್ನಿಸಿದ್ದಾರೆ.
ದರೋಡೆಕೋರರನ್ನು ತಡೆಯಲು ಬಂದಿದ್ದ ರಿಯಾ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.




