ಬೆಳ್ತಂಗಡಿ: ಬೊಲೆರೊ ವಾಹನ ಆಟೋ ರಿಕ್ಷಾಕ್ಕೆ ಡಿಕ್ಕಿ: ಆಟೋದಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯ

ಬೆಳ್ತಂಗಡಿ: ಓವರ್ ಟೇಕ್ ಮಾಡುವ ರಭಸದಲ್ಲಿ ಎದುರಿನಿಂದ ಬರುತ್ತಿದ್ದ ಬೊಲೆರೋ ವಾಹನ ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯಗೊಂಡ ಘಟನೆ ಉಜಿರೆಯ ಓಡಲ ಕ್ರಾಸ್ ನಲ್ಲಿ ಡಿ.28 ರಂದು ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಓಡಲ ಕ್ರಾಸ್ ನಲ್ಲಿ ಬೆಳಾಲು ಕಡೆಯಿಂದ ಉಜಿರೆ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಉಜಿರೆ ಕಡೆಯಿಂದ ಬರುತ್ತಿದ್ದ ಕಾರ್ಯತಡ್ಕ ನಿವಾಸಿ ಚಾಲಕ ಸಾಂತಪ್ಪ ಎಂಬವರ ಬೊಲೋರೊ ವಾಹನ ಓವರ್ ಟೇಕ್ ಮಾಡುವ ರಭಸದಲ್ಲಿ ಡಿ.28 ರಂದು ರಾತ್ರಿ ಸುಮಾರು 8:30 ಕ್ಕೆ ಡಿಕ್ಕಿ ಹೊಡೆದಿದೆ ಈ ವೇಳೆ ರಿಕ್ಷಾದಲ್ಲಿದ್ದ ಚಾಲಕ ಸೇರಿ ನಾಲ್ಕು ಮಂದಿಗೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ರಿಕ್ಷಾ ಚಾಲಕ ಗುರಿಪಳ್ಳ ನಿವಾಸಿ ಪ್ರವೀಣ್(42), ಕುಪ್ಪೆಟ್ಟಿ ನಿವಾಸಿ ರಫೀಕ್(55) ಕೊಟ್ಟಿಗೆಹಾರ ನಿವಾಸಿ ಸುಹೈಲ್ (30), ಕೊಟ್ಟಿಗೆಹಾರ ನಿವಾಸಿ ಚೇತನ್ (27) ಗೆ ಗಂಭೀರ ಗಾಯಗೊಂಡಿದ್ದು, ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಸುಹೈಲ್ ತಲೆಯ ಭಾಗಕ್ಕೆ ಹೆಚ್ಚು ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಅಪಘಾತದ ರಭಸಕ್ಕೆ ಎರಡು ವಾಹನಗಳಿಗೆ ಹಾನಿಯಾಗಿದೆ.