ಲಾರಿ ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು
ಪಾವಗಡ: ತಾಲ್ಲೂಕಿನ ರಾಜವಂತಿ ಗ್ರಾಮದ ಹತ್ತಿರ ಎ.ಆರ್.ರೊಪ್ಪ ಗೇಟ್ ಬಳಿ ನಿಂತಿದ್ದ ಲಾರಿ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ತಾಲ್ಲೂಕಿನ ವೈ ಎನ್ ಹೊಸಕೋಟೆ ಹೋಬಳಿ ವೈ ಎನ್ ಹಳ್ಳಿಯ ಗಂಗರಾಜು(29) ಮೃತರು.
ಮೃತ ಗಂಗರಾಜು ಕೊರಟಗೆರೆಯ (ಐ ಐ ಎಫ್ ಎಲ್) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆಂದು ಪಟ್ಟಣದ ಕಡೆಯಿಂದ ಕೊರಟಗೆರೆಗೆ ಹೋಗುವಾಗ ನಿಲ್ಲಿಸಿದ್ದ ಲಾರಿಗೆ ದ್ವಿಚಕ್ರ ವಾಹನ ಢಿಕ್ಕಿಯಾಗಿದೆ. ಮೃತ ಗಂಗರಾಜು ಗೆ 25 ದಿನಗಳಿಂದೆ ಮದುವೆ ಆಗಿತ್ತು. ಪಾವಗಡ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.





