March 26, 2026

ಉಳ್ಳಾಲ : ಅಕ್ರಮ ಕಸಾಯಿಖಾನೆಗೆ ಪೊಲೀಸ್‌‌ ದಾಳಿ: ಆರೋಪಿ ಸ್ಥಳದಿಂದ ಪರಾರಿ

0
IMG-20221225-WA0030.jpg

ಉಳ್ಳಾಲ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ರೂ.25,000 ಬೆಲೆಬಾಳುವ 100 ಕೆ.ಜಿ ದನದ ಮಾಂಸವನ್ನು ವಶಕ್ಕೆ ಪಡೆದಿರುವ ಘಟನೆ ಪಾವೂರು ಗ್ರಾಮದ ಮಲಾರ್ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಮಲಾರ್ ಬದ್ರಿಯಾನಗರ ನಿವಾಸಿ ಜಾಫರ್ ಸಾದಿಕ್ ಪರಾರಿಯಾಗಿದ್ದಾನೆ. ತನ್ನ ಮನೆಯಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾರಾಟ ನಡೆಸಲು ಯತ್ನಿಸುತ್ತಿರುವ ಖಚಿತ ಮಾಹಿತಿ ಪಡೆದ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದಾರೆ.

ಸುಮಾರು 25,000/- ರೂಪಾಯಿ ಅಂದಾಜು ಮೌಲ್ಯದ 100 ಕೆ.ಜಿ ತೂಕದ ದನದ ಮಾಂಸವನ್ನು ಮತ್ತು ತೂಕದ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ.

ಕೊಣಾಜೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಎಸ್.ಐ ಮಲ್ಲಿಕಾರ್ಜುನ್ ಬಿರಾದಾರ್ ಸೇರಿದಂತೆ ಹೆಡ್ ಕಾನ್ಸ್ಟೇಬಲ್ ಗಳಾದ ಮಲಾರ್ ಬೀಟ್ ನ ನವೀನ್ ಹಾಗೂ ಠಾಣಾ ಗುಪ್ತ ವಾರ್ತೆ ಸಿಬ್ಬಂದಿ ಶೈಲೇಂದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!