February 4, 2026

ಬಿಜೆಪಿಯೊಂದಿಗಿನ ನಂಟು ತೊರೆದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ‘ ಘೋಷಿಸಿದ ಜನಾರ್ದನ ರೆಡ್ಡಿ

0
IMG-20221225-WA0011.jpg

 
ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಕೊನೆಗೂ ಬಿಜೆಪಿಗೆ ಗುಡ್‌ಬೈ ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿಯೂ ಸಂಚಲನ ಮೂಡಿಸಿದ್ದಾರೆ. 

ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸದೊಂದು ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ. ತಮ್ಮ ನೂತನ ಪಕ್ಷಕ್ಕೆ “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ” ಎಂದು ಹೆಸರಿಟ್ಟಿದ್ದು , ಈವರೆಗೆ ಬಿಜೆಪಿ ಪಕ್ಷದೊಂದಿಗೆ ಇದ್ದ ಎಲ್ಲಾ ನಂಟು ತೊರೆಯುವುದಾಗಿ ಹೇಳಿ ಹಲವು ದಿನಗಳ ಊಹಾಪೋಹಗಳಿಗೆ ಅವರು ಬೆಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿ ತೆರೆ ಎಳೆದಿದ್ದಾರೆ.

ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ತಮ್ಮ ಎರಡು ದಶಕದ ರಾಜಕೀಯ ಜೀವನದ ಆಗು-ಹೋಗುಗಳ ಬಗ್ಗೆ ವಿವರಿಸಿದ್ದಾರೆ. ಆ ಮೂಲಕ, ಬಿಜೆಪಿ ತಮ್ಮನ್ನು ಕೆಲವು ವರ್ಷಗಳಿಂದ ನಡೆಸಿಕೊಂಡಿರುವುದಕ್ಕೆ ಬೇಸತ್ತು ಬಿಜೆಪಿಯಿಂದ ಹೊರಬಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವನ್ನು ಕಟ್ಟಿದ್ದೇನೆ. ಆ ಮೂಲಕ ಹೊಸ ಪಕ್ಷದ ಉದಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದ ಅಭಿವೃದ್ದಿಯೇ ನನ್ನ ಗುರಿಯಾಗಿದ್ದು, ಜನ ಮೆಚ್ಚುವ ರೀತಿಯಲ್ಲಿ ನನ್ನ ಪಕ್ಷ ಕೆಲಸ ಮಾಡುತ್ತದೆ ಎಂದು ಇದೇ ವೇಳೆ ಭರವಸೆ ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!