10 ಅಡಿ ಉದ್ದದ್ದ ಸುರಂಗ ಕೊರೆದ ಕಳ್ಳರು: ಬ್ಯಾಂಕ್‌ನಲ್ಲಿದ್ದ 1 ಕೋಟಿ ರೂ. ಮೌಲ್ಯದ ಚಿನ್ನ ದೋಚಿ ಪರಾರಿ
ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರದಲ್ಲಿ ಬ್ಯಾಂಕ್ ದೋಚಲು 10 ಅಡಿ ಉದ್ದದ್ದ ಸುರಂಗ ಕೊರೆದ ಕಳ್ಳರು, ಬ್ಯಾಂಕ್‌ನಲ್ಲಿದ್ದ 1 ಕೋಟಿ ರೂ. ಮೌಲ್ಯದ ಚಿನ್ನ ದೋಚಿ ಪರಾರಿಯಾಗಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ನ ಕಾನ್ಪುರದ ಬಾನುತಿ ಶಾಖೆಯಲ್ಲಿ ಕಳ್ಳತನ ನಡೆದಿದೆ. ಕಳ್ಳರು ನಾಲ್ಕು ಅಡಿ ಅಗಲ ಹಾಗೂ 10 ಅಡಿ ಉದ್ದದ್ದ ಸುರಂಗ ಕೊರೆದು ಬ್ಯಾಂಕ್‌ನ ಸ್ಟ್ರಾಂಗ್ ರೂಮ್ ಪ್ರವೇಶಿಸಿದ್ದಾರೆ.
ಈ ವೇಳೆ ಚಿನ್ನಾಭರಣ ಇಟ್ಟಿದ್ದ ಲಾಕರ್ ಒಡೆದು, 1 ಕೋಟಿ ರೂ. ಮೌಲ್ಯದ 1.8 ಕೆಜಿ ಚಿನ್ನಾಭರಣ ದೋಚಿದ್ದಾರೆ. ಆದರೆ ನಗದು ಲಾಕರ್ ಒಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಈ ವೇಳೆ ಲಾಕರ್‌ನಲ್ಲಿ 32 ಲಕ್ಷ ರೂ. ನಗದು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.





